ಬಾರಕ್ (ಇದನ್ನು ಸಾಮಾನ್ಯವಾಗಿ ಬಾರಕ್ಯು ಎಂದು ಉಚ್ಚರಿಸಲಾಗುತ್ತದೆ.ಇದು ನೈಋತ್ಯ ಫ್ರಾನ್ಸ್ ನ ತುರ್ಸನ್ ಪ್ರದೇಶದ ಸುತ್ತಮುತ್ತಲೂ ದೊರೆಯುವ ಫ್ರೆಂಚ್ ವೈನ್ ಗಾಗಿ ಬೆಳೆಯುವ ದ್ರಾಕ್ಷಿ ತಳಿಯ ಬಿಳಿ ದ್ರಾಕ್ಷಿಯಾಗಿದೆ. ಇದರಿಂದ ಪೂರ್ಣ ಪ್ರಮಾಣದ ಬಗೆ ಬಗೆಯ ಮದ್ಯಸಾರಗಳನ್ನು ಅದರ ಕರಟಕಾಯಿಯ ಕಂಪಿನ ಮೂಲಕ ತಯಾರಿಸಬಹುದಾಗಿದೆ. ಹಣ್ಣು ಬೆಳೆಗಳ ತಜ್ಞರ ಅನುಮಾನದ ಪ್ರಕಾರ ಸದ್ಯದ ದ್ರಾಕ್ಷಿ ತಳಿಯು ಫೊಲ್ಲೆ ಬ್ಲಾಂಕೆಯ ಕಸಿಯಾಗಿದೆ.(ಇದು ಬಹುಶಃ ಬೊರ್ಡೆಲೆಜಾ ಜುರಿಯಾ ಗೆ ಸಮಾನಾರ್ಥಕವಾಗಿದೆ.)ಅದಲ್ಲದೇ ಸುವಿಗ್ನಾನ್ ಬ್ಲಾಂಕ್ ಜೊತೆಗೆ ತನ್ನ ಗುಣಲಕ್ಷಣಗಳನ್ನು ತೋರಿಸುತ್ತದೆ. == ಇತಿಹಾಸ == ಈ ದ್ರಾಕ್ಷಿಯ ನಿಜವಾದ ಮೂಲ ಯಾವುದೆಂಬುದು ನಿಖರವಾಗಿ ತಿಳಿದಿಲ್ಲ,ಆದರೆ ಹಣ್ಣು ಬೆಳೆಗಳ ತಜ್ಞರು ಮಾತ್ರ, ಫೊಲ್ಲೆ ಬ್ಲಾಂಕೆ ಮತ್ತು ಸುವಿಗ್ನಾನ್ ಬ್ಲಾಂಕ್ ಗಳ ಮಿಶ್ರಣದ ತಳಿಯೇ ಈ ಬಿಳಿ ದ್ರಾಕ್ಷಿಗಳೆಂದು ನಂಬುತ್ತಾರೆ. ಈ ಮೊದಲು ಫ್ರಾನ್ಸ್ ನ ನೈಋತ್ಯದಲ್ಲಿ ಎಲ್ಲಾ ಕಡೆಗೂ ಇದನ್ನು ಬೆಳೆಯಲಾಗುತ್ತಿತ್ತು.ಆದರಿಂದು ಅದರ ಬಳ್ಳಿಯನ್ನು ಪ್ರಧಾನವಾಗಿ ಲಾಂಡೆಸ್ ಡಿಪಾರ್ಟ್ ಮೆಂಟ್ ನಲ್ಲಿ ವಿರಳವಾಗಿ ಬೆಳೆಯಲಾಗುತ್ತದೆ.ಇಲ್ಲಿ délimité qualité supérieure () ಎಂಬ ಗುಣಮಟ್ಟದ ದ್ರಾಕ್ಷಿಯನ್ನು ತುರ್ಸನ್ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಆಗ 20ನೆಯ ಶತಮಾನದಲ್ಲಿ ಬಾರಕ್ ದ್ರಾಕ್ಷಿಯು ಬೆಳೆಗಾರರಲ್ಲಿ ಜನಪ್ರಿಯತೆ ಗಳಿಸಿತು.ಯಾಕೆಂದರೆ ಈ ತಳಿಯು ಸುಮಾರಾಗಿ ಬೂರ್ಸ್ಟ್ ಹುಡಿಗೆ ಯಾವುದೇ ಪ್ರತಿಕ್ರಿಯೆ ತೋರದಿರುವುದು ಇದರ ಬಹು ಮುಖ್ಯ ಗುಣವಾಗಿದೆ.ಅದಲ್ಲದೇ ಇನ್ನುಳಿದ ದ್ರಾಕ್ಷಿ ತಳಿಗಳಲ್ಲಿನ ಹತ್ತರಲ್ಲಿನ ಒಂದು ಪಾಲು ಮಾತ್ರ ನಾಶವಾಗಬಹುದು. ಆದರೆ 1980 ರ ಹೊತ್ತಿಗೆ ಈ ದ್ರಾಕ್ಷಿ ಬೆಳೆಯು ಅಳಿವಿನಂಚಿನಲ್ಲಿತ್ತು.ಯಾಕೆಂದರೆ ಲಾಂಡೆಸೆ ಮತ್ತು ಸುತ್ತಮುತ್ತಲಿನ ಪ್ರದೇಶವು ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಒಳಪಟ್ಟಿತ್ತು.ಹೀಗಾಗಿ ದ್ರಾಕ್ಷಿ ಬೆಳೆಗಳ ಪ್ರದೇಶಗಳು ಕಣ್ಮರೆಯಾಗಲಾರಂಭಿಸಿದ್ದವು. ವೈನ್ ತಯಾರಿಕೆಯ ಇತಿಹಾಸಕಾರ ಮತ್ತು ತಜ್ಞ ಜಾಂಕಿಸ್ ರಾಬಿನ್ಸನ್ ಅವರ ಪ್ರಕಾರ ಬಾರಕ್ಯು ತಳಿಯನ್ನು ಬಾಣಸಿಗ ಮೈಕೆಲ್ ಗೆರಾರ್ಡ್ ಅವರ ಪ್ರಯತ್ನದಿಂದಾಗಿ ಅದರ ಅಳಿವನ್ನು ತಡೆಯಲಾಗಿತ್ತು.ಅದಲ್ಲದೇ ಅವರು ಮೈಕೆಲ್ ಪ್ರಮಾಣಿತ ಎಗ್ನೆಯ್-ಲೆಸ್-ಬೇನ್ಸ್ ನಲ್ಲಿ 3 ತಾರಾ ಹೊಟೆಲು ಲೆಸ್ ಪ್ರೆಸ್ ಡೆ ಎಗೆನೆಸ್ ನ್ನು ತಮ್ಮ ಒಡೆತನದಲ್ಲಿಯೇ ನಡೆಸುತ್ತಿದ್ದರು. ತುರ್ಸನ್ ನಲ್ಲಿದ್ದ ವೈನ್ ಎಸ್ಟೇಟ್ ನ್ನು ಅವರು ಮತ್ತು ಅವರ ಪತ್ನಿ ಗೆರೆರ್ಡ್ ಜೊತೆಯಾಗಿ ಈ ಬೆಳೆಯಲ್ಲಿ ಆಸಕ್ತಿ ಹುಟ್ಟುವಂತೆ ಕಾರ್ಯ ಮಾಡಿದರು.ಬಾರಕ್ಯು-ಮೂಲದ ಉತ್ತಮ ಕಂಪುಳ್ಳ ಮದ್ಯ ಉತ್ಪಾದನೆಗೆ ಅವರು ಪ್ರೊತ್ಸಾಹಿಸಿದರು.ಹಲವಾರು ವಿಮರ್ಶಕರು ಇದನ್ನು "ಖ್ಯಾತಿಯುಳ್ಳದ್ದು" ಎಂದು ಬಣ್ಣಿಸಿದರು. == ಮದ್ಯ ತಯಾರಿಕೆಯ ಪ್ರದೇಶ == ದ್ರಾಕ್ಷಿಯು ಬಹುತೇಕ ಫ್ರಾನ್ಸ್ ನ ನೈಋತ್ಯ ಭಾಗದ ತುರ್ಸಾನ್ ಪ್ರದೇಶದಲ್ಲಿ ಖ್ಯಾತಿ ಪಡೆದಿದೆ.ಜಗತ್ತಿನ ಹಲವೆಡೆ ಇದರ ಬೆಳೆ ಬೆಳೆಯುತ್ತಿದ್ದರೂ ಅದು ಆಕ್ರಮಿಸಿದ ಜಾಗ ಮಾತ್ರ ಇದಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಹೇಳಬಹುದು. == ಮದ್ಯಸಾರಗಳು == ಬಾರಕ್ಯು ಇಳುವರಿಗಳಿಂದ ಪೂರ್ಣ ಪ್ರಮಾಣದ ಮದ್ಯ ತಯಾರಿಸಬಹುದಾಗಿದೆ,ಇವುಗಳಲ್ಲಿ ಎಷ್ಟು ಪ್ರಮಾಣದ ಆಲ್ಕ್ ಹಾಲ್ ಮಟ್ಟಗಳು ಮತ್ತು ಸಾಂದ್ರತೆ ಇದೆ ಎಂಬುದನ್ನು ಗುರ್ತಿಸಬಹುದಾಗಿದೆ. ಸುಗ್ನಿಆನ್ ಬ್ಲಾಂಚ್ ತಳಿಯಂತೆಯೇ ಇದು ಅದೇ ತರಹದ ಕಂಪುಳ್ಳ ಗುಣಲಕ್ಷಣಗಳನ್ನು ಹಂಚಿಕೊಂಡಿರುತ್ತದೆ. == ಸಮಾನಾರ್ಥಕಗಳು == ನೂರಾರು ವರ್ಷಗಳಿಂದ, ಬಾರಕ್ ಅದೇ ರೀತಿ ಗುಣಲಕ್ಷಣದ ದ್ರಾಕ್ಷಿ ತಳಿಗಳನ್ನು ಹೊಂದಿದೆ ಅವುಗಳಲ್ಲಿ: ಬಾರಕೆ, ಬಾರೊಕಾ, ಆರೊಕೆ, ಬಾರೊಕ್ವು, ಬ್ಲ್ಯಾಂಕ್ ಬೊರ್ಡಿಸ್ಲ್ಸ್, ಬೊರ್ಡಿಸ್ಲ್ಸ್, ಬೊರ್ಡಿಸ್ಲ್ಸ್ ಬ್ಲ್ಯಾಂಕ್ , ಬೊರ್ಡೆಲಿಜಾ ಜುರಿಯಾ, ಬೊರ್ಡಿಸ್ಲ್ಸ್, ಬೊರ್ಡಿಸ್ಲ್ಸ್, ಕ್ಲಾವೆರಿಕ್ ಬ್ಲ್ಯಾಂಕ್ , ಎಸ್ಕ್ರಿಪ್ಟ್ ಫೊಲ್ಲೆ, ಮುಸ್ಕೊಡೆಲ್ಲೆ ದೆ ನೇಟ್ಸ್, ಪೆಟಿಟ್ ಬೊರ್ಡಿಸ್ಲ್ಸಿ, ಪ್ಲಾಂಟ್ ಬೊರ್ಡೆಲೆಸ್ ಅಂಡ್ ಸೇಬಲ್ ಬ್ಲ್ಯಾಂಕ್. == ಉಲ್ಲೇಖಗಳು‌‌ ==